Monday, December 22, 2008

ನಿಮ್ಮೆಲ್ಲರ ಪ್ರೋತ್ಸಾಹಗಳಿಗೆ ನಾನು ಚಿರ ಋಣಿ...

ಎಲ್ಲರಿಗೂ ನಮಸ್ಕಾರಗಳು. ವ್ಯಾಸರು ನಮ್ಮೆಲ್ಲರನ್ನು ಬಿಟ್ಟು ಹೊರಟು ಹೋದಾಗ ಅದೇನೋ ಒಂದು ಅವ್ಯಕ್ತವಾದಂತಹ ಸಂಕಟ , ಮನಸ್ಸಿನಲ್ಲೊಂದು ತೊಳಲಾಟಗಳು ನಡೆಯುತ್ತಲೇ ಇದ್ದವು. ಅದು ಹಾಗೇ ಮುಂದುವರಿದಿದೆ. ಎಂ.ವ್ಯಾಸರು ನಾನು ಕಂಡುಕೊಂಡ ಮಟ್ಟಿಗೆ ಒಂದು ಅದ್ಭುತ ಪ್ರತಿಭೆ... ಅವರನ್ನು ಒಂದು ಸಣ್ಣ ಸಾಕ್ಷ್ಯ ಚಿತ್ರದ ಮೂಲಕ ಕಟ್ಟಿಕೊಡುವ, ಹಿಡಿದಿಡುವುದು ಕಷ್ಟಸಾಧ್ಯ. ಆದರೂ ಒಂದು ಸಣ್ಣ ಪ್ರಯತ್ನ ಮಾಡಿದೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹಿಂದ. ಅದೇ ವ್ಯಾಸಪಥ.
ಒಂದು ತಿಂಗಳ ಹಿಂದೆ ಮೂಡಬಿದಿರೆಯಲ್ಲಿ ನಡೆದ ಮಿನಿ ಚಲನಚಿತ್ರೋತ್ಸವದಲ್ಲಿ ಗೆಳೆಯ ಶೇಖರ ಅಜೆಕಾರ್ ಉತ್ಸಾಹದಿಂದ ವ್ಯಾಸಪಥವನ್ನು ಪ್ರದರ್ಶಿಸಿದರು. ಸುಮಾರು ಒಂದೂವರೆ ಸಾವಿರದಷ್ಟು ಸಂಖ್ಯೆಯ ಜನ ಅದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದಕ್ಕೂ ಮುಂಚೆ ನನ್ನ ಆಪ್ತ ವಲಯ, ವ್ಯಾಸರ ಆಪ್ತ ವಲಯದ ಸ್ನೇಹಿತ ಬಳಗ ಈ ಸಾಕ್ಷ್ಯಚಿತ್ರವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದಾರೆ.
ಇದೀ ಹಿರಿಯರೂ, ಆತ್ಮೀಯರೂ, ಸ್ನೇಹಿತರೂ ಆದಂತಹ ಜಯಂತ ಕಾಯ್ಕಿಣಿಯವರು ವ್ಯಾಸಪಥವನ್ನು ವೀಕ್ಷಿಸಿ ಒಂದು ಮೆಚ್ಚುಗೆಯ ನುಡಿಯನ್ನಾಡಿದ್ದಾರೆ. ಅದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಡಾ.ವರದರಾಜ ಚಂದ್ರಗಿರಿ, ಡಾ.ಮಹಾಲಿಂಗ ಭಟ್, ಪ್ರೊ.ರಾಜ್ ಮೋಹನರ್ ರಾವ್, ಶ್ರೀಪೂರ್ಣ, ಅಕ್ಷತಾ ಸಿ.ಎಚ್, ಗೆಳೆಯರಾದ ನಾಗೇಂದ್ರ ತ್ರಾಸಿ, ಬಾಲಮುರಳಿ, ಮಹೇಶ್ ಪ್ರಭು, ಕಿರಣ್, ಈಶ್ವರ,ಸುನಿಲ್, ತಂಗಿ ದೀಷ್ಮಾ, ಚೈತನ್ಯ ಪರಾಡ್ಕರ್... ಹೀಗೆ ಅನೇಕಮಂದಿ ಮೆಚ್ಚಿ ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

No comments: