Sunday, December 21, 2008

`ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆ

ಮಂಗಳೂರು, ಡಿ.20:ಕಥೆಗಾರ ಎಂ.ವ್ಯಾಸ ಅವರನ್ನು ತಾತ್ವಿಕ ದೃಷ್ಠಿಕೋನದಲ್ಲಿ ನೋಡುವ ಕಾರ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಂ.ವ್ಯಾಸ ಅವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಅವುಗಳನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಳಿಯುವಂತೆ ಮಾಡಬೇಕಾಗಿದೆ. ಅವರ ಸಾಹಿತ್ಯದ ಕುರಿತಾದ ಸಿ.ಡಿ.ಗಳು, ಸಾಕ್ಷ್ಯಚಿತ್ರಗಳು ಇನ್ನೂ ಬರಬೇಕೆಂದು ಸಾಹಿತಿ,ವಿಮರ್ಷಕ ಡಾ.ಮಹಾಲಿಂಗ ಭಟ್ ಅಭಿಪ್ರಾಯಿಸಿದರು.
ಅವರು ಶನಿವಾರ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಪತ್ರಕರ್ತ ಹರೀಶ್ ಕೆ. ಆದೂರು ನಿದರ್ೇಶನದ `ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಎಂ.ವ್ಯಾಸ ಅವರ ಸಮಗ್ರ ಕಥೆಗಳ ಸಂಕಲನವನ್ನು ಹೊರತರುವ ಚಿಂತನೆ ನಡೆಯುತ್ತಿದೆ. ವ್ಯಾಸ ಅವರ ಸ್ನೇಹ ತೆಕ್ಕೆಗೆ ಬಿದ್ದವರಿಗೆ ಮಾತ್ರ ಅವರನ್ನು ಸಮರ್ಪಕವಾಗಿ ಅಥರ್ೈಸಲು ಸಾಧ್ಯವಾಗಿದೆ. ಅವರ ಕಥೆಗಳು ಮಾಮೂಲಿಗಿಂತ ಭಿನ್ನವಾದಂತಹ ವಸ್ತುಗಳನ್ನೊಳಗೊಂಡಿವೆ ಎಂದು ಅತಿಥಿಗಳಾದ ಡಾ.ವರದರಾಜ ಚಂದ್ರಗಿರಿ ವ್ಯಾಖ್ಯಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಅಂಕಣಗಾರ ಯು.ಮಹೇಶ್ ಪ್ರಭು `ವ್ಯಾಸಪಥ' ಸಾಕ್ಷ್ಯಚಿತ್ರ ಸಂಗ್ರಹಯೋಗ್ಯವಾಗಿದ್ದು ಮೌಲ್ಯಾಧಾರಿತವಾಗಿ ಮೂಡಿಬಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಿದ್ದರು.
ಎಂ.ವ್ಯಾಸರ ಪುತ್ರ ತೇಜಸ್ವಿ ವ್ಯಾಸ ಅವರಿಗೆ `ವ್ಯಾಸ ಪಥ' ಸಾಕ್ಷ್ಯಚಿತ್ರದ ಸಿ.ಡಿಯನ್ನು ಹಸ್ತಾಂತರಿಸಲಾಯಿತು.
ದೀಪಿಕಾ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು. ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೂತರ್ಿ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಕೆ. ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಅಕ್ಷತಾ ಭಟ್ ಸಿ.ಎಚ್. ವಂದಿಸಿದರು.
ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಭಾಷಾ ವಿಭಾಗ ಕಾರ್ಯಕ್ರಮ ಆಯೋಜಿಸಿತ್ತು.

























































No comments: