Monday, December 22, 2008

ನಿಮ್ಮೆಲ್ಲರ ಪ್ರೋತ್ಸಾಹಗಳಿಗೆ ನಾನು ಚಿರ ಋಣಿ...

ಎಲ್ಲರಿಗೂ ನಮಸ್ಕಾರಗಳು. ವ್ಯಾಸರು ನಮ್ಮೆಲ್ಲರನ್ನು ಬಿಟ್ಟು ಹೊರಟು ಹೋದಾಗ ಅದೇನೋ ಒಂದು ಅವ್ಯಕ್ತವಾದಂತಹ ಸಂಕಟ , ಮನಸ್ಸಿನಲ್ಲೊಂದು ತೊಳಲಾಟಗಳು ನಡೆಯುತ್ತಲೇ ಇದ್ದವು. ಅದು ಹಾಗೇ ಮುಂದುವರಿದಿದೆ. ಎಂ.ವ್ಯಾಸರು ನಾನು ಕಂಡುಕೊಂಡ ಮಟ್ಟಿಗೆ ಒಂದು ಅದ್ಭುತ ಪ್ರತಿಭೆ... ಅವರನ್ನು ಒಂದು ಸಣ್ಣ ಸಾಕ್ಷ್ಯ ಚಿತ್ರದ ಮೂಲಕ ಕಟ್ಟಿಕೊಡುವ, ಹಿಡಿದಿಡುವುದು ಕಷ್ಟಸಾಧ್ಯ. ಆದರೂ ಒಂದು ಸಣ್ಣ ಪ್ರಯತ್ನ ಮಾಡಿದೆ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹಿಂದ. ಅದೇ ವ್ಯಾಸಪಥ.
ಒಂದು ತಿಂಗಳ ಹಿಂದೆ ಮೂಡಬಿದಿರೆಯಲ್ಲಿ ನಡೆದ ಮಿನಿ ಚಲನಚಿತ್ರೋತ್ಸವದಲ್ಲಿ ಗೆಳೆಯ ಶೇಖರ ಅಜೆಕಾರ್ ಉತ್ಸಾಹದಿಂದ ವ್ಯಾಸಪಥವನ್ನು ಪ್ರದರ್ಶಿಸಿದರು. ಸುಮಾರು ಒಂದೂವರೆ ಸಾವಿರದಷ್ಟು ಸಂಖ್ಯೆಯ ಜನ ಅದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದಕ್ಕೂ ಮುಂಚೆ ನನ್ನ ಆಪ್ತ ವಲಯ, ವ್ಯಾಸರ ಆಪ್ತ ವಲಯದ ಸ್ನೇಹಿತ ಬಳಗ ಈ ಸಾಕ್ಷ್ಯಚಿತ್ರವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದಾರೆ.
ಇದೀ ಹಿರಿಯರೂ, ಆತ್ಮೀಯರೂ, ಸ್ನೇಹಿತರೂ ಆದಂತಹ ಜಯಂತ ಕಾಯ್ಕಿಣಿಯವರು ವ್ಯಾಸಪಥವನ್ನು ವೀಕ್ಷಿಸಿ ಒಂದು ಮೆಚ್ಚುಗೆಯ ನುಡಿಯನ್ನಾಡಿದ್ದಾರೆ. ಅದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಡಾ.ವರದರಾಜ ಚಂದ್ರಗಿರಿ, ಡಾ.ಮಹಾಲಿಂಗ ಭಟ್, ಪ್ರೊ.ರಾಜ್ ಮೋಹನರ್ ರಾವ್, ಶ್ರೀಪೂರ್ಣ, ಅಕ್ಷತಾ ಸಿ.ಎಚ್, ಗೆಳೆಯರಾದ ನಾಗೇಂದ್ರ ತ್ರಾಸಿ, ಬಾಲಮುರಳಿ, ಮಹೇಶ್ ಪ್ರಭು, ಕಿರಣ್, ಈಶ್ವರ,ಸುನಿಲ್, ತಂಗಿ ದೀಷ್ಮಾ, ಚೈತನ್ಯ ಪರಾಡ್ಕರ್... ಹೀಗೆ ಅನೇಕಮಂದಿ ಮೆಚ್ಚಿ ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

Sunday, December 21, 2008

`ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆ

ಮಂಗಳೂರು, ಡಿ.20:ಕಥೆಗಾರ ಎಂ.ವ್ಯಾಸ ಅವರನ್ನು ತಾತ್ವಿಕ ದೃಷ್ಠಿಕೋನದಲ್ಲಿ ನೋಡುವ ಕಾರ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಂ.ವ್ಯಾಸ ಅವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಅವುಗಳನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಳಿಯುವಂತೆ ಮಾಡಬೇಕಾಗಿದೆ. ಅವರ ಸಾಹಿತ್ಯದ ಕುರಿತಾದ ಸಿ.ಡಿ.ಗಳು, ಸಾಕ್ಷ್ಯಚಿತ್ರಗಳು ಇನ್ನೂ ಬರಬೇಕೆಂದು ಸಾಹಿತಿ,ವಿಮರ್ಷಕ ಡಾ.ಮಹಾಲಿಂಗ ಭಟ್ ಅಭಿಪ್ರಾಯಿಸಿದರು.
ಅವರು ಶನಿವಾರ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಪತ್ರಕರ್ತ ಹರೀಶ್ ಕೆ. ಆದೂರು ನಿದರ್ೇಶನದ `ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಎಂ.ವ್ಯಾಸ ಅವರ ಸಮಗ್ರ ಕಥೆಗಳ ಸಂಕಲನವನ್ನು ಹೊರತರುವ ಚಿಂತನೆ ನಡೆಯುತ್ತಿದೆ. ವ್ಯಾಸ ಅವರ ಸ್ನೇಹ ತೆಕ್ಕೆಗೆ ಬಿದ್ದವರಿಗೆ ಮಾತ್ರ ಅವರನ್ನು ಸಮರ್ಪಕವಾಗಿ ಅಥರ್ೈಸಲು ಸಾಧ್ಯವಾಗಿದೆ. ಅವರ ಕಥೆಗಳು ಮಾಮೂಲಿಗಿಂತ ಭಿನ್ನವಾದಂತಹ ವಸ್ತುಗಳನ್ನೊಳಗೊಂಡಿವೆ ಎಂದು ಅತಿಥಿಗಳಾದ ಡಾ.ವರದರಾಜ ಚಂದ್ರಗಿರಿ ವ್ಯಾಖ್ಯಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಅಂಕಣಗಾರ ಯು.ಮಹೇಶ್ ಪ್ರಭು `ವ್ಯಾಸಪಥ' ಸಾಕ್ಷ್ಯಚಿತ್ರ ಸಂಗ್ರಹಯೋಗ್ಯವಾಗಿದ್ದು ಮೌಲ್ಯಾಧಾರಿತವಾಗಿ ಮೂಡಿಬಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಿದ್ದರು.
ಎಂ.ವ್ಯಾಸರ ಪುತ್ರ ತೇಜಸ್ವಿ ವ್ಯಾಸ ಅವರಿಗೆ `ವ್ಯಾಸ ಪಥ' ಸಾಕ್ಷ್ಯಚಿತ್ರದ ಸಿ.ಡಿಯನ್ನು ಹಸ್ತಾಂತರಿಸಲಾಯಿತು.
ದೀಪಿಕಾ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು. ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೂತರ್ಿ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಕೆ. ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಅಕ್ಷತಾ ಭಟ್ ಸಿ.ಎಚ್. ವಂದಿಸಿದರು.
ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಭಾಷಾ ವಿಭಾಗ ಕಾರ್ಯಕ್ರಮ ಆಯೋಜಿಸಿತ್ತು.

























































Thursday, December 18, 2008

Wednesday, December 17, 2008

ನಿಮ್ಮಲ್ಲೊಂದು ಸಣ್ಣ ಕ್ಷಮೆ ಕೋರಿ...

ಸ್ನೇ ಹಿತರೇ... ಹೌದು ನಿಮ್ಮಲ್ಲೊಂದು ಸಣ್ಣ ಕ್ಷಮೆ ಕೋರಲೇ ಬೇಕಾಗಿದೆ. ಕೆಲಸದ ಒತ್ತಡಗಳಿಂದ `ವ್ಯಾಸಪಥ' ಬ್ಲಾಗ್ ಹಲವಾರು ಸಮಯಗಳಿಂದ ಹಾಗೇ ಉಳಿದುಕೊಂಡಿತ್ತು. ಹೊಸ ಹೊಸ ಲೇಖನ ವಿಚಾರಗಳಿಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ ಎಂ. ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರವೊಂದನ್ನು ನಿಮಿಸಿದರೆ ಹೇಗೆಂಬ ಯೋಚನೆ ಮನದಲ್ಲಿ ಬಂತು. ಪರಿಣಾಮ ಕೇವಲ ಎರಡೇ ದಿನಗಳಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದೇವೆ. ಅವಸರವಸರದಲ್ಲಿ ಇದು ನಿಮಿಸಿದ್ದೇವೆ. ಒಪ್ಪು ತಪ್ಪು ಸಹಜ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಿ ಪ್ರೋತ್ಸಾಹಿಸಿರುವಿರಾಗಿ ನಂಬುವೆ.

ಇಂತು ನಿಮ್ಮವ,

ಹರೀಶ್ .ಕೆ.ಆದೂರು


20ರಂದು ವ್ಯಾಸಪಥ ಬಿಡುಗಡೆ


ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

Wednesday, August 27, 2008

Sunday, August 3, 2008



ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ