Sunday, July 27, 2008


ಅವರಲ್ಲೊಂದು ಕ್ಷಮೆ ಕೇಳಿ...

ರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದ ಎಂ.ವ್ಯಾಸ ನಮ್ಮೆಲ್ಲನ್ನು ಬಿಟ್ಟು ದೂರ ಹೋಗಿದ್ದಾರೆ...
ಒಂದೂವರೆ ತಿಂಗಳ ಹಿಂದೆ ಅವರ ಮನೆಗೆ ಹೋಗಿದ್ದೆ... ಅದು ಅಚಾನಕ್. ಹಾಗೇ ಊರಿಗೆ ಹೋದಾಗ ಅವರನ್ನು ಮಾತನಾಡಿಸುವ ಮನಸ್ಸಾಯಿತು. ಸಂಜೆ 5.30ರ ಹೊತ್ತಿಗೆ ಹೋಗಿದ್ದೆ...ಅವರು ಒಬ್ಬರೇ ಇದ್ದರು. ಒಂದಷ್ಟು ಹೊತ್ತು ಕುಳಿತು ಹರಟಿದೆವು. ಅವರ ಮೊಮ್ಮಗ ದೊಡ್ಡ ಲೋಟದಲ್ಲಿ ಚಹಾ ತಂದಿಟ್ಟ. `ಸರ್...ನಿಮ್ಮ ಬರಹಗಳನ್ನು ಒಂದು ಬ್ಲಾಗ್ನಲ್ಲಿ ಹಾಕಿದರೆ ಹೇಗೆ...' ಎಂದು ಹೇಳಿದ್ದೆ. `ಅದನ್ನು ಪುನಾ ನೀವು ಕುಟ್ಟಬೇಕಲ್ವಾ...ಯಾಕೆ ಅದೆಲ್ಲಾ...ಇನ್ನು...ಮಾಡೋದಾದ್ರೆ ಮಾಡಿ...' ಎಂದು ಹೇಳಿದ್ದರು... ಅದೇ ಮಾಮೂಲು ಗಡಿಬಿಡಿಯಲ್ಲಿ ಅದನ್ನು ಪೂರೈಸಲಾಗಲಿಲ್ಲ. ಇದ್ದಕ್ಕಿದ್ದಂತೆ ಆ ಮಹಾಚೇತನ ಮರೆಯಾದಾಗ ನೋವು ತಡಕೊಳ್ಳಲಾಗಿಲ್ಲ... ಇದೀಗ ಅವರು ದೂರ ಹೋಗಿದ್ದಾರೆ...ಅವರ ಅಗಾಧವಾದ ಸಾಹಿತ್ಯವನ್ನು ನಮ್ಮೆಲ್ಲರ ಮುಂದಿರಿಸಿ... ವ್ಯಾಸರು ದೂರ ಹೋಗಿದ್ದಾರೆ...ಅವರ ನೆನಪು ಎಂದೆಂದಿಗೂ ಹಚ್ಚ ಹಸಿರು... ಇದೀಗ ಅವರ ಬಗೆಗಿನ ಲೇಖನಗಳನ್ನು , ಮಾಹಿತಿಯನ್ನು ಕ್ರೋಢೀಕರಿಸುವುದು ನನ್ನ ಉದ್ದೇಶ, ಎಂ.ವ್ಯಾಸರ ಅಭಿಮಾನಿಗಳು ಇದಕ್ಕೆ ಸಹಕರಿಸುವ ಪೂರ್ಣ ಭರವಸೆ ನನ್ನದು..ಇಂತು ನಿಮ್ಮ ಪ್ರೀತಿಯ...

ಹರೀಶ್ ಕೆ.ಆದೂರು.


`ಎರಡಕ್ಷರದ' ಹಿರಿಮೆ

ಇನ್ನು ನೆನಪು ಮಾತ್ರ...


`` ಗಡಿನಾಡ ಕಾಸರಗೋಡಿನಲ್ಲಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಕೊಡುಗೆ ನೀಡಿದವರು ಹಿರಿಯ ಕಥೆಗಾರ ಎಂ.ವ್ಯಾಸ. ಮನೆತುಂಬಾ ಪುಸ್ತಕ,ಗ್ರಂಥ, ಸಾಹಿತ್ಯ ಪತ್ರಿಕೆಗಳು..ಅಭಿಮಾನಿ ಓದುಗರ, ಹಿರಿ ಕಿರಿಯ ಸಾಹಿತಿಗಳ ಪತ್ರಗಳ ರಾಶಿ...ಈ ನಡುವೆ ಎಂ.ವ್ಯಾಸ. ಕಾಸರಗೋಡಿನಲ್ಲಿದ್ದೇ ಕೇರಳ, ಕನರ್ಾಟಕ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದರು.
ವ್ಯಾಸರೊಂದಿಗಿನ ಆತ್ಮೀಯ ಸಂಬಂಧ ಅದೊಂದು ಮರೆಯದ ಅನುಬಂಧ. ನಮ್ಮಂಥ ಕಿರಿಯರಲ್ಲೂ ಆ ಹಿರಿಯ ವ್ಯಕ್ತಿ ಅಂತಹ ಸ್ನೇಹ, ಪ್ರೀತಿ , ಆತ್ಮೀಯತೆಯನ್ನು ಇಟ್ಟುಕೊಳ್ಳುವ ವಿಶಾಲ ಹೃದಯ ಹೊಂದಿದ್ದರು. ಆ ಭಾಗ್ಯ ನನಗೂ ಒಲಿದು ಬಂದಿದೆ. ಇದೀಗ ಎಂ.ವ್ಯಾಸ ನಮ್ಮೆಲ್ಲರ ಬಿಟ್ಟು ಹೊರಟು ಹೊರಟು ಹೋಗಿದ್ದಾರೆ. ಹೃದಯ ಭಾರವಾಗುತ್ತಿದೆ... ಅವರೊಂದಿಗಿದ್ದ ಕ್ಷಣ ಕ್ಷಣಗಳೂ ನೆನಪಿಗೆ ಬರುತ್ತವೆ...ಕಣ್ಣು ಮಂಜಾಗುತ್ತವೆ... ಇನ್ನು ಅವರು ನೆನಪು ಮಾತ್ರ...

- ಹರೀಶ್ ಕೆ.ಆದೂರು

ಹೌದು... ಅವರೊಬ್ಬ ಸರಳ ಸಜ್ಜನ ಜೀವಿ... ಅವರು ಎರಡಕ್ಷರದ ಕಥೆಗಳಿಗೆ ಹೆಸರು ವಾಸಿ... ಅವರ ಹೆಸರೂ ಹಾಗೆ ಎರಡಕ್ಷರವೇ... ಅವರೇ ಹಿರಿಯ ಕಥೆಗಾರ ಎಂ. ವ್ಯಾಸ.
ಅವರ ಕಥೆಗಳಿಗೆ ಕೇವಲ ಎರಡಕ್ಷರಗಳ ಶೀಷರ್ಿಕೆ. ಈ ಕಾರಣಕ್ಕಾಗಿಯೇ ಎರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದಿದ್ದಾರೆ.`ದತ್ತ', `ತ್ರಿಜ್ಜ' , `ಕೆಂಡ' ಈ ರೀತಿ ಆಕರ್ಷಕ ಶೀಷರ್ಿಕೆ ಅವರದ್ದು. ಮಾಮೂಲಿಗಿಂತ ಭಿನ್ನವಾದ ಕಥೆಗಾರ ಅವರು.
ಅವರ ಕಥೆಯೂ ಹಾಗೆ ಒಂದು ವಿಭಿನ್ನವಾದುದು. ಅದು ಸುಂದರವಾದ ಹೂರಣ. ಅದು ಕಥೆಯಲ್ಲ...ಬದಲಾಗಿ ಅದೊಂದು ಘಟನೆಗಳ ಬುತ್ತಿ.ಚಿತ್ರಗಾರನ ಚಿತ್ರವಿದ್ದಂತೆ... ಕಥೆಯ ಬಗ್ಗೆ ಅವರು ಹೇಳುವ ರೀತಿಯೇ ಒಂದು ವಿಭಿನ್ನ ಅನುಭವ... ಆ ರೀತಿ ಅವರ ಕಥೆಗಳು ಸಾಗುತ್ತವೆ. ಅವರ ಕಥೆಯನ್ನೋದುವಾಗ ಅದೊಂದು ಚಿತ್ರಣದಂತೆ ಭಾಸವಾಗುತ್ತದೆ. ಆ ರೀತಿ ವ್ಯಾಸ ಅವರ ಕಥೆಗಳು ಓದುಗರಿಗೆ ಒಂದು ವಿಭಿನ್ನ , ಆಪ್ತ ಅನುಭವವನ್ನೀಯುತ್ತವೆ.
ಅವರ ಕವನಗಳೂ ಹಾಗೆಯೇ.
ವ್ಯಾಸ ಈ ಹೆಸರು ಕೇಳಿದರೆ ಅವರ ಕಥೆಗಳ ಒಂದೊಂದು ಸಾಲೂ ಮನಃದಲ್ಲಿ ಮೂಡಿಬರುತ್ತವೆ. ಸಪೂರವಾದ ನೀಳ ಕಾಯ. ಶ್ವೇತ ವರ್ಣದ ಅಂಗಿ, ಕಪ್ಪು ಕನ್ನಡಕ , ಉದ್ದದ ಕೂದಲು, ಕೋಲು ಮುಖ ಹೀಗೆ ಅವರ ಚಹರೆ ಕಣ್ಣಮುಂದೆ ಕಟ್ಟಿನಿಲ್ಲುತ್ತದೆ. ಆತ್ಮೀಯ ಜೀವಿ ಈ ವ್ಯಾಸ. ಈ ಅನುಭವ ಅವರೊಂದಿಗೆ ಅಷ್ಟೊಂದು ಒಡನಾಟ ಹೊಂದಿದವರಿಗೆ ಮಾತ್ರ ಚೆನ್ನಾಗಿ ಅರ್ಥವಾಗುತ್ತದಷ್ಟೆ. ಅಂತಹ ವ್ಯಾಸ ನಮ್ಮೆಲ್ಲರನ್ನು ಬಿಟ್ಟು ಹೊರಟೇ ಹೋಗಿದ್ದಾರೆ. ತಟ್ಟನೆ ಎದ್ದು ನಡೆದೇ ಬಿಟ್ಟಿದ್ದಾರೆ...ಇನ್ನೂ ಅವರು ಇದ್ದಾರೆಂಬ ಭಾವನೆ ಎಲ್ಲರ ಮನದಲ್ಲೂ ಹಾಗೇ ಉಳಿಸಿ...
ವ್ಯಾಸ ಎಲ್ಲರಂತಲ್ಲ. ನೇರ ಮಾತು.. ಪ್ರಶಸ್ತಿ , ಪ್ರಚಾರಗಳಿಗೆ ಓಲೈಸಿದವರಲ್ಲ.
ಅವರು ತನ್ನ ಕಪ್ಪು ಫ್ರೇಮಿನ ಕನ್ನಡಕ ಕೈಯಲ್ಲಿ ಹಿಡಿದು ಕಾಲ ಮೇಲೆ ಕಾಲು ಹಾಕಿ ಕುಳಿತು ಮಾತಿಗಿಳಿದರೆ ಒಂದೊಂದಾಗಿ ಘಟನೆಗಳು ಅವರ ಬಾಯಿಂದ ಬರುತ್ತವೆ. ಹಿರಿ ಕಿರಿಯ ಸಾಹಿತಿಗಳು, ಅವರ ಸಾಹಿತ್ಯ ಕೃತಿಗಳು, ಹೊಸ ತಲೆಮಾರಿನ ಸಾಹಿತ್ಯ ಮಿತ್ರರ ಒಡನಾಟ ಇವೆಲ್ಲವನ್ನೂ ಅವರು ಹೇಳುತ್ತಲೇ ಸಾಗುತ್ತಾರೆ. `ನಿಮಗಿವರನ್ನು ಗೊತ್ತುಂಟಾ... ಚೆನ್ನಾಗಿ ಬರೀತಾನೆ... ಒಳ್ಳೆ ಮನುಷ್ಯ ' ಹೀಗೆ ಒಬ್ಬೊಬ್ಬರ ಬಗ್ಗೆಯೂ ಸಾಕಷ್ಟು ಮಾಹಿತಿ ಹೊಂದಿದ ವ್ಯಾಸರ ಒಡನಾಟವೇ ಒಂದು ವಿಶಿಷ್ಠ ಅನುಭವನ್ನೀಯುತ್ತದೆ. ಅವರ ಮನೆಯೊಳಗೆ ಕುಳಿತು ಸಾಹಿತ್ಯದ ಚಚರ್ೆಗಳು, ವಿಮರ್ಷಗಳು ತೊಡಗಿದರಂತೂ ಹೊತ್ತು ಹೋಗುವುದೇ ಗೊತ್ತಾಗದು... ಗಡಿನಾಡ ಕಾಸರಗೋಡಿನಲ್ಲಿ ಹಸಿರ ಐಸಿಯ ನಡುವೆ ಕುಳಿತು ಅವರು ರಚಿಸದ ಸಾಹಿತ್ಯಗಳು ಇಂದು ಏರಿದ ಎತ್ತರ ಊಹಿಸಲಾಧ್ಯ.
ಯಾರ ಮನಸ್ಸನ್ನೂ ನೋಯಿಸದ ಅವರು ಓರ್ವಉತ್ತಮ ಕಥೆಗಾರರು. ಅಷ್ಟೇ ಅಲ್ಲದೆ ಕಥೆಯ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಎಂ ವ್ಯಾಸ ಕೇರಳದಲ್ಲಷ್ಟೇ ಅಲ್ಲ, ಕನರ್ಾಟಕದಲ್ಲೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
`ಕಥೆ ಬರೆಯುವುದು ಒಂದು ಕಲೆ. ಅದು ಹೇಳಿ ,ಕೇಳಿ ಬರುವಂತಹುದಲ್ಲ. ಅದು ಹೃದಯದಿಂದ ಬರುವಂತಹುದು. ಅದೊಂದು ಸಿದ್ದಿ, ಅನುಭವವೆ' ಎಂದು ಹೇಳುವ ವ್ಯಾಸರು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಏಕಾಂತ ಬಯಸುತ್ತಾರೆ. ಯಾವೊಂದು ರಗಳೆಯೂ ಇಲ್ಲದೆ ತನ್ನಷ್ಟಕ್ಕೆ ಒಂಟಿಯಾಗಿ ವ್ಯಾಸರು ಕುಳಿತರೆ ಅಲ್ಲೊಂದು ಅದ್ಭುತ ಕಥೆ ರಚನೆಯಾಗುತ್ತದೆ.
`ಉಷಾ ಕಿರಣ' ಕನ್ನಡ ದೈನಿಕದಲ್ಲಿ ಅವರು ಬರೆದ `ಜನಪಥ' ಅಂಕಣ ಬರಹ ಜನಪ್ರಿಯತೆ ಪಡೆದಿತ್ತು. ಈ ಅಂಕಣ ಬರಹಗಳನ್ನು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಿಸಿ ಬಿಡುಗಡೆಗೊಳಿಸಿದೆ.



ಹೊಸದಿಗಂತ ದಿನಪತ್ರಿಕೆಯಲ್ಲಿ ಬಂದ ವರದಿ...


ಕನ್ನಡ ಪ್ರಭ ವರದಿ...


`ಕನ್ನಡ ಪ್ರಭ'ದಲ್ಲಿ ವ್ಯಾಸರ ಬಗೆಗಿನ ವರದಿ...


ಪ್ರಜಾವಾಣಿ ವರದಿ...


ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ವ್ಯಾಸರ ಬಗೆಗಿನ ಲೇಖನ

ಉದಯವಾಣಿಯಲ್ಲಿ ಪ್ರಕಟಗೊಂಡ ಸುದ್ದಿ...
ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.

ವಿ.ಕದಲ್ಲಿ ವ್ಯಾಸರ ಬಗೆಗಿನ ಲೇಖನಗಳು...

ಎಂ.ವ್ಯಾಸ ನಿಧನದ ಸುದ್ದಿ ವಿ.ಕದಲ್ಲಿ...


ಗೆಳೆಯ ಸುಧನ್ವ ದೇರಾಜೆ `ವಿಜಯ ಕರ್ನಾಟಕ'ದಲ್ಲಿ ಬರೆದ ಲೇಖನ.